ಕಾಮುಕರ ನಡುವೆ ಕಾಮಣ್ಣ

ಪ್ರದೀಪ ಕೆಲಸಕ್ಕೋಸ್ಕರ ತನ್ನ ಹಳ್ಳಿ ಬಿಟ್ಟು ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದ, ಅಲ್ಲಿ ಅವನ ಸ್ನೇಹಿತ ರಾಜನ ರೂಮಿನಲ್ಲಿ ತಂಗಿದ್ದ, ಇಬ್ಬರೂ ಒಂದೇ ಹಳ್ಳಿಯವರು. ಒಂದೆರಡು ದಿನದಲ್ಲಿ ಪ್ರದೀಪನಿಗೆ ಒಂದು ಒಳ್ಳೆಯ ಕೆಲಸ ಸಿಕ್ಕಿತು. ರೂಮು ಬಹಳ ಚಿಕ್ಕದಿದ್ದ ಕಾರಣ ಪ್ರದೀಪ ಬೇರೆ ಮನೆಯನ್ನು ಹುಡುಕಲು ಶುರುಮಾಡಿದ. ಆದರೆ ಇನ್ನೂ ಮನೆ ಸಿಕ್ಕಿರಲಿಲ್ಲ. ಕೊನೆಗೆ ರಾಜ ಮತ್ತು ಪ್ರದೀಪ ಇಬ್ಬರು ಬ್ರೋಕರ್ ಹತ್ತಿರ ಹೋಗಲು ನಿರ್ಧರಿಸಿದರು. ಹೋಗುವ ಮಧ್ಯದಲ್ಲಿ ರಾಜುಗೆ, ಶಾಸ್ತ್ರಿ ಅಂತ ಒಬ್ಬರು ಪರಿಚಯದವರು ಸಿಕ್ಕಿದರು. ಹಾಗೆ ಅಲ್ಲೇ ಸ್ವಲ್ಪ ಹೊತ್ತು ಮಾತನಾಡಿಸಿದ ರಾಜು ಕೊನೆಗೆ ಮನೆಯ ವಿಷಯ ಹೇಳಿದ. ತಕ್ಷಣ ಶಾಸ್ತ್ರಿ ಅವರು ತಮಗೆ ಗೊತ್ತಿದ ಮನೆ ಅಡ್ರೆಸ್ ಕೊಟ್ಟು ನೋಡು ರಾಜ ಇಲ್ಲಿ ಮನೆ ಖಾಲಿ ಇದೆ. ಮನೆ ಓನರ್ ಹತ್ತಿರ ಮಾತಾಡು ನಿಮಗೆ ಹಿಡಿಸಿದರೆ ಹೋಗಿ.. ಅಂತ ಹೇಳಿ ಶಾಸ್ತ್ರಿ ಅವರು ಬರ್ತೀನಿ ರಾಜು ನಂಗೆ ಸ್ವಲ್ಪ ಕೆಲಸ ಇದೆ ಅಂತ ಹೇಳಿ ಮುಂದೆ ಹೋದರು. ರಾಜು ಮತ್ತೆ ಪ್ರದೀಪ ಇಬ್ಬರು ಅಡ್ರೆಸ್ ಹಿಡಿದು ಸಿಕ್ಕಿದವರನ್ನೆಲ್ಲ ಅಡ್ರೆಸ್ಸ್ ಕೇಳುತ್ತ ಕೊನೆಗೆ ಮನೆ ಹತ್ತಿರ ಬಂದರು. ಓನರ್ ಹೊರಗೆ ಇದ್ದರು. ಬಂದ ವಿಷಯ ತಿಳಿಸಿದ ಮೇಲೆ ಓನರ್ ಮನೆ ಎಲ್ಲ ತೋರಿಸದ್ರು. ಮನೆ ಚಿಕ್ಕದಾಗಿತ್ತು, ಅಷ್ಟೇನೂ ಚೆನ್ನಾಗಿರಲಿಲ್ಲ, ಬಾಡಿಗೆ ತುಂಬಾ ಜಾಸ್ತಿ ಹೇಳಿದ ಓನರ್. ಯಾಕೋ ಪ್ರದೀಪನಿಗೆ ಮನೆ ಸಮಾಧಾನವಾಗಲಿಲ್ಲ. ಕೊನೆಗೆ ನಾಳೆ ಹೇಳುತ್ತೇವೆ ಅಂತ ಹೇಳಿ ಇಬ್ಬರು ಆಚೆ ಬಂದರು.

ರಾಜನಿಗೆ ತನ್ನ ಆಫೀಸಿನಿಂದ ಫೋನ್ ಬಂದಿತು. ಅದಕ್ಕೆ ಅವನು ಲೋ ಪ್ರದೀಪ ನಾನು ಹೋಗ್ಬೇಕು ಕಣೋ ಬಾಸ್ ಕರೀತಾ ಇದ್ದಾರೆ, ನೋಡು ಇದೆ ರೋಡ್ನಲ್ಲಿ ಮನೆ ಖಾಲಿ ಇರೋದು ಸಿಕ್ಕಿದರು ಸಿಗಬಹುದು ಅಂತ ಹೇಳಿ ಹೊರಟು ಹೋದ. ಕೊನೆಗೆ ಪ್ರದೀಪ ಒಂದು ಸಿಗರೆಟ್ ಸೇದುತ್ತ ಅದೇ ರಸ್ತೆಯಲ್ಲಿ ಹುಡುಕಿಕೊಂಡು ಹೊರಟ. ಸಿಗರೆಟ್ ಮುಗಿಯುತ್ತ ಬಂತು ಮನೆ ಸಿಗಲೇ ಇಲ್ಲ. ಮುಖ ಸಪ್ಪೆ ಮಾಡಿಕೊಂಡು ಬಸ್ ಸ್ಟಾಪ್ ಹತ್ತಿರ ಹೆಜ್ಜೆ ಹಾಕಿದ. ಅದರ ಮಾರ್ಗ ಮಧ್ಯೆದಲ್ಲಿ ಟು ಲೆಟ್ ಅಂತ ಬೋರ್ಡ್ ಹಾಕಿರೋದು ಕಣ್ಣಿಗೆ ಬಿತ್ತು. ಪ್ರದೀಪನಿಗೆ ಏನೋ ಸಿಕ್ಕಿದ ಸಂತೋಷ ಆಯ್ತು. ನಗುತ್ತ ಮನೆ ಕಡೆಗೆ ಹೆಜ್ಜೆ ಹಾಕಿದ. ಹೊರಗಿಂದ ಮನೆಯನ್ನು ಒಮ್ಮೆ ನೋಡಿದ ಬಹಳ ಚೆನ್ನಾಗಿತ್ತು. ಗೇಟ್ ತೆಗೆದು ಹೋಗಿ ಮನೆ ಬಾಗಿಲನ್ನು ತಟ್ಟಿದ. ೫ ನಿಮಿಷ ಆದಮೇಲೆ ಬಾಗಿಲು ತೆರೆಯಿತು. ಪ್ರದೀಪನ ಹೃದಯ ಒಮ್ಮೆ ಧಬ್ ಅಂತ ಶಬ್ದ ಮಾಡಿತು. ಎದುರಿಗೆ ಒಂದು ಬೊಂಬೆ ತರ ಇರೋ ಹುಡುಗಿ ನಿಂತಿದ್ದಾಳೆ. ವಯಸ್ಸು ಸುಮಾರು ೨೧ ಇರಬಹುದು. ಲಂಗ ದಾವಣಿ ಹಾಕಿದ್ದಾಳೆ. ಒಳ್ಳೆ ಮುದ್ದಾದ ಬೆಳ್ಳನೆ ಮುಖ, ಶರೀರಕ್ಕೆ ತಕ್ಕಂತೆ ಅವಳ ಅಂಗಾಂಗಗಳು, ಎತ್ತರಕ್ಕೆ ತಕ್ಕಂತೆ ಮೈ ಕಟ್ಟು, ಒಳ್ಳೆ ಬೇಳೂರು ಶಿಲಾಬಾಲಿಕೆ ತರ ಇದ್ದಾಳೆ. ಅವಳನ್ನು ಹಾಗೆಯೇ ನೋಡುತ್ತಾ ನಿಂತು ಬಿಟ್ಟ. ಅವನನ್ನು ಗಮನಿಸಿದ ನಯನ ಕೊಂಚ ಸಿಟ್ಟು ಮಾಡಿಕೊಂಡು "ಯಾರು ನೀವು ಏನು ಆಗಬೇಕಾಗಿತ್ತು" ಅಂತ ಜೋರಾಗಿ ಕೇಳಿದಳು. ಪ್ರದೀಪ ಯಾವುದೋ ಲೋಕದಿಂದ ಈ ಲೋಕಕ್ಕೆ ಇಳಿದುಬಿಟ್ಟ.

ತೊದಲುತ್ತ ಬಂದ ವಿಷಯ ಹೇಳಿದ. ಅವರ ಅಮ್ಮನಿಗೆ ವಿಷಯ ತಿಳಿಸಿದಳು. ಪ್ರದೀಪ ಒಮ್ಮೆ ಮನೆಯನ್ನೆಲ್ಲ ಸುತ್ತಾಡಿದ. ಮನೆಯು ಮೊದಲನೇ ಮಹಡಿಯಲ್ಲಿದೆ. ಸ್ವಲ್ಪ ವಿಶಾಲವಾದ ಹೊರಾಂಗಣ, ಒಂದು ರೂಂ, ಅಡುಗೆ ಮನೆ, ಸ್ನಾನದ ಕೋಣೆ, ಟಾಯ್ಲೆಟ್ ಎಲ್ಲ ಇತ್ತು. ನೀರಿಗೆ ಏನೂ ತೊಂದರೆ ಇರಲಿಲ್ಲ. ಪ್ರದೀಪನಿಗೆ ಮನೆ ತುಂಬಾ ಖುಷಿ ಆಯ್ತು ಕೊನೆಗೆ ಓನರ್ ಹೇಳಿದ ಬಾಡಿಗೆ ಅಡ್ವಾನ್ಸ್ ಗೆ ಒಪ್ಪಿಕೊಂಡ. ಎರಡೇ ದಿನದಲ್ಲಿ ಆ ಮನೆಗೆ ಶಿಫ್ಟ್ ಆದನು.

Comments:

No comments!

Please sign up or log in to post a comment!