ಅಬಲೆಯರ ಆಪತ್ಭಾಂಧವ-ಭಾಗ ೧

ಇನ್ಸ್ಪೆಕ್ಟರ್ ಭೀಮಸಿಂಗ್ ಮಳೆಯಲ್ಲಿ ತಮ್ಮ ಡಿಪಾರ್ಟ್ಮೆನ್ಟ್ ಕೊಟ್ಟ ಬುಲೆಟ್ ಮೋಟಾರ್ ಬೈಕ್ ನಲ್ಲಿ ಎವೆಯಿಕ್ಕದೆ ಹಳ್ಳಿರಸ್ತೆ ನೋಡುತ್ತಾ ನೆಡೆಸುತ್ತಲೆ ಇದ್ದಾರೆ... ಯಾವುದೋ ಕೇಸ್ ಮೇಲೆ ಕೇದಗೆ ಹಳ್ಳಿಗೆ ಮಧ್ಯಾಹ್ನ ಹೋದವರು, ಲೇಟಾಗಿಬಿಟ್ಟಿದೆ ಎಂದು ದಡಬಡಾಯಿಸಿಕೊಂಡು ಹಾಗೇ ಸಿಟಿಯಲ್ಲಿದ್ದ ಮನೆಯತ್ತ ಹೊರಟಿದ್ದಾರೆ.. ನಲವತ್ತು ವರ್ಷ ವಯಸಿನ ನಿಷ್ಟಾವಂತ, ಧೀರ ಅಫೀಸರ್..ರಾಷ್ಟ್ರಪತಿ ಪದಕ ಸಿಕ್ಕಿದೆ... ಅವರ ಮನ ಯೋಚಿಸುತ್ತಿದೆ.. ತನ್ನದೊಂದು ಮನೆಯಂತೆ ಮನೆ...!

ಇವರ ಸೇವೆಯ ಚಿತ್ರ-ವಿಚಿತ್ರ ಟೈಮಿಂಗ್ಸ್, ಅಪಾಯ, ಜವಾಬ್ದಾರಿ ಅರಿತುಕೊಳ್ಳಲಾರದ ಹೆಂಡತಿ ಡೈವೋರ್ಸ್ ಕೊಟ್ಟು ೯ ರಿಂದ ೫ ರವರೆಗೆ ದುಡಿವ ಮತ್ತೋರ್ವನನ್ನು ಮದುವೆಯಾಗಿ ಹೋಗಿ ಬಿಟ್ಟಿದ್ದಳು.."ಯು ಆರ್ ಇರ್ರೆಸ್ಪಾನ್ಸಿಬಲ್"ಎಂದು ಕೋರ್ಟಿನಲ್ಲಿ ಕೂಗಿದ್ದಳಲ್ಲ...ವಿಶಾದದ ನಗೆ ಅವರ ಮಳೆನೆಂದ ಮೊಗದ ಮೇಲೆ ಸಾಗಿ ಹೋಯಿತು,,,ದೇಶ ಸೇವೆ, ಕರ್ತವ್ಯ ನಿಷ್ಟೆಗೆ ಅವಳ ಈ ಹೊಸ ಡೆಫಿನಿಶನ್ . ಹುಮ್ಮ್!... ತನಗೆ ಸಿಗಬೇಕಾದ ಸುಖ ಅವಳಿಗೆ ಸಿಕ್ಕಿರಲಿಲ್ಲ, ಪಾಪ, ಎಂದು ಭೀಮಸಿಂಗ್ ಸುಮ್ಮನಾಗಿದ್ದರು..

"ಆದರೂ ತನಗೂ ದೈಹಿಕ ಆಸೆ, ಅವಶ್ಯಕತೆ ಇರುವುದಿಲ್ಲವೆ...?ಅದನ್ನೆಲ್ಲ ಹತ್ತಿಕ್ಕಿಕೊಂಡು ತಾನು...ಸರಿ ಸರಿ, ಸಾಕಿದು...", ಎಂದು ಹಳ್ಳಿರಸ್ತೆಯ ಹಳ್ಳವನ್ನು ಮೆತ್ತಗೆ ಬೈಕ್ ನಿಂದ ದಾಟಿಸಿ ರಸ್ತೆ ನೋಡುತ್ತ ಸಾಗಿದರು...

Comments:

No comments!

Please sign up or log in to post a comment!